ಡಿಮೀಟ್ರಿಯಸ್ 3

	ಸಿನಿಕ ತತ್ತ್ವವೇತ್ತ. ಕ್ರಿ.ಶ. ಸುಮಾರು 1ನೆಯ ಶತಮಾನದಲ್ಲಿ ಪ್ರಸಿದ್ಧನಾಗಿದ್ದನೆನ್ನಲಾಗಿದೆ. ಕ್ಯಾಲಿಗುಲ, ನೀರೊ, ವೆಸ್ಪಾಸಿಯನರ ಕಾಲದಲ್ಲಿ ರೋಮಿನಲ್ಲಿ ಪ್ರಚಾರದಲ್ಲಿದ್ದ ಸ್ಟೋಯಿಕ್ ಪಂಥದ ಕಡೆ ಇವನ ಒಲವು ಹೆಚ್ಚಾಗಿದ್ದಂತೆ ತೋರುತ್ತದೆ. ವೆಸ್ಪಾಸಿಯನ್ ಈತನನ್ನು ಗಡೀಪಾರು ಮಾಡಿ ದೂರದ ದ್ವೀಪವೊಂದಕ್ಕೆ ರವಾನಿಸಿದನಂತೆ. ತ್ರೇಸಿಯ ಪೇಕ್ಟಸ್ ಈತನ ಗೆಳೆಯ. ಸೆನಕ ಈತನನ್ನು ಬಹುವಾಗಿ ಮೆಚ್ಚಿದ. ಈತ ಯಾವ ಒಂದು ಹೊಸ ಅಭಿಪ್ರಾಯವನ್ನೂ ಮಂಡಿಸಿಲ್ಲವಾದರೂ ವೈಯಕ್ತಿಕ ಆಚಾರಬದ್ಧ ಜೀವನಕ್ಕಾಗಿ ಹಾಗೂ ಕಂಡದ್ದನ್ನು ಹೆದರದೆ ಹೇಳುವ ಸ್ಥೈರ್ಯಕ್ಕಾಗಿ ಈತ ಪ್ರಸಿದ್ಧನಾಗಿದ್ದಾನೆ.     (ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ